Friday, May 28, 2010

ಮಕ್ಕಳು ಮತ್ತು ಭಾಷೆ


ಬ್ಲಾಗಿನ ಮೊದಲ ಬರಹ...

ಇದ್ದಕ್ಕಿದ್ದಂತೆ ಅಖಿಲ online ಬಂದು ನೀವು ಯಾಕೆ ಬ್ಲಗ್ ನಲ್ಲಿ ಬರಿಯೋದಿಲ್ಲ ಅಂತ ಕೇಳಿದಾಗ... ಏನು ಬರೆಯುವುದು? ಯಾಕೆ ಬರೆಯುವುದು? ಎಂಬ ಪ್ರಶ್ನೆಗಳು ಮೂಡಿಬಂದವು. ಆದರೂ ಇವತ್ತಿನಿಂದಲೇ ಬರೀತೀನಿ ಒಂದು ವಿಷಯ / title ಕೊಡಿ ಎಂದು ಕೇಳಿದಾಗ ಬಂದ ಉತ್ತರ "ನಾನು English Medium" ನಲ್ಲಿ ಓದಿದವಳ ಹತ್ತಿರ ಕನ್ನಡದ ತಲೆಬರಹ ಕೇಳಿದರೆ ಏನು ಹೇಳಲಿ ಎಂಬ ಪ್ರಶ್ನೆ ನನಗೆ ತಿರುಗುಬಾಣ ವಾಯಿತು.

ಇಂಗ್ಲಿಷ್ ಮೀಡಿಯಂನಲ್ಲಿ ಕಲಿತ ಕನ್ನಡಿಗರ ತೊಂದರೆಯೇ (ಶಕ್ತಿ) ಅದು!
ಅವರಿಗೆ ತಿಳಿಯದ ವಿಚಾರವೆಂದರೆ ಹೆಚ್ಚಿನ ಭಾಷೆ ಕಲಿತವರಿಗೆ ಬುದ್ಧಿಮತ್ತತೆ ಹೆಚ್ಚಿರುತ್ತದೆ. ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಬೇಗನೆ ಬದಲಾಗುವ ಚಾಕಚಕ್ಯತೆ ಹೆಚ್ಚಾಗಿರುತ್ತದೆ. ಮನಶಾಸ್ತ್ರಜ್ಞರ ಪ್ರಕಾರ 6ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು 2ಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿತವರೇ ಆಗಿದ್ದರೆ ಅವರು ಸರಾಗವಾಗಿ, ಸುಲಲಿತವಾಗಿ ವಾಹನ ಚಾಲನೆ ಮಾಡಬಲ್ಲರು ಎಂದು. ಅಂದರೆ ವಾಹನದ ಗೇರ್ ಬದಲಾವಣೆಯಾಗಲಿ, ರಸ್ತೆಯಲ್ಲಿ ಚಲಿಸುವಾಗ ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು ಅವರು ಬೇಗನೆ ತೆಗೆದುಕೊಳ್ಳುತ್ತಾರೆ ಎಂದು. (ಬೆಂಗಳೂರಿನಲ್ಲಿ ಹೆಂಗಸರು ಗಾಡಿ ಓಡಿಸುವಾಗ ಆಗುವ ಅಚಾತುರ್ಯದ ಬಗ್ಗೆ ಮನಶಾಸ್ತ್ರಜ್ಞರು ಏನನ್ನೂ ಹೇಳಲಾರರು!! ಪಾಪ!!) ಮನೆಯ ಮಾತು ಕನ್ನಡವಾಗಿದ್ದು ಶಾಲೆಯಲ್ಲಿ ಇಂಗ್ಲೀಷ್ ಕಲಿತವರಿಗೆ ಈ ಗುಣಗಳು ಬರುವ ಸಾಧ್ಯತೆಗಳು ಹೆಚ್ಚು (ಆದರೆ ಮನೆಯಲ್ಲಿ ಇಂಗ್ಲಿಷ್ ಮಾತಾಡುವವರಾದರೂ ಇರಬೇಕು). ಹಾಗೆಂದು ಇಂಗ್ಲಿಷ್ ಬಗ್ಗೆ ಮಾತ್ರ ಹೇಳುತ್ತಿದ್ದೀನಿ ಎಂದಲ್ಲ. ತಮಿಳು, ತೆಲಗು, ಮಲಯಾಳಂ ಯಾವುದೇ ಎರಡು ಅಥವಾ ಅದಕ್ಕಿಂತ ಹೆಚ್ಚು ಭಾಷೆ ಅದರಲ್ಲೂ ಚಿಕ್ಕವಯಸ್ಸಿನಲ್ಲಿ ಕಲಿತವರಿಗೆ ಈ ಗುಣಗಳು ಇರುತ್ತದೆ. ಹೀಗಾಗಿಯೇ ಮನೆಯಲ್ಲಿ ಮಾತಾಡುವ (ಮತೃಭಾಷೆ) ಭಾಷೆ ಮತ್ತು ಹೊರಗಿನ ಪ್ರಪಂಚದ, ಸಮಾಜದ (society) ಭಾಷೆ ಬೇರೆ ಇರುವವರು ಹೆಚ್ಚಿನ ಬುದ್ದಿವಂತರು ಆಗಿರುವವರು ಎಂಬುದು ನನ್ನ ಕಲ್ಪನೆ/ಅಭಿಪ್ರಾಯ. ಕನ್ನಡನಾಡಿನಲ್ಲಿ ಇರುವ ಅನ್ಯಭಾಷಿಕರು ಹೆಚ್ಚಿನ ಉನ್ನತಿ ಹೊಂದಲು ಕಾರಣವೇ ಅದಾಗಿದೆ. ಅಷ್ಟೆ ಅಲ್ಲ ಹೊರರಾಜ್ಯ, ಹೊರದೇಶಗಳಲ್ಲಿರುವ ಕನ್ನಡಿಗರ ಉನ್ನತಿಗೂ ಇದೇ ಕಾರಣ. ನಾವು ಬೆಂಗಳೂರಿನಂತಹ ಊರಿನಲ್ಲಿ ಕುಳಿತು ಅಯ್ಯೋ ನಾವು ಇವರೆಲ್ಲರಿಗಿಂತ ಹಿಂದುಳಿದಿದ್ದೇವೆ, ಕನ್ನಡಿಗರೇ ಹೀಗೆ ಎಂಬ ಮನದ ಅಳಲನ್ನು ಆಗಾಗ ತೋರಿಸಿಕೊಳ್ಳುತ್ತಿರುತ್ತೇವೆ. ಈ ನಕಾರಾತ್ಮದ ನಮ್ಮ ನಡೆ ನಮಗೆ ತೊಂದರೆ ಕೊಡಲಿದೆ, ಇದೇ ರೀತಿ ಬೇರೆ ಭಾಷಿಕರು ಅವರ ರಾಜ್ಯದಲ್ಲಿ ಕನ್ನಡಿಗರ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ.

ಕನ್ನಡ ಮಾಧ್ಯಮದಲ್ಲಿ ಓದಿದ ಅನೇಕ ವಿಜ್ಞಾನಿಗಳ, ವಿಚಾರವಾದಿಗಳ ಉದಾಹರಣೆಗಳಿವೆ. ಮನೆಯಿಂದ 10 ಕಿಲೋಮೀಟರ್ ದೂರದಲ್ಲಿದ್ದ ಸರಕಾರಿ ಕನ್ನಡ ಶಾಲೆಗೆ ನಡೆದುಕೊಂಡು ಹೋಗಿ ಓದಿದ ವಿಜ್ಞಾನಿ ಯು. ಆರ್. ರಾವ್, ಬಡಕುಟುಂಬದಲ್ಲಿ ಹುಟ್ಟಿ ವಿಜ್ಞಾನಿಯಾದ ಡಾ|| ಹೆಚ್ಚ ನರಸಿಂಹಯ್ಯ ಮುಂತಾದವರ ಉದಾಹರಣೆಯಾಗಿ ಕೊಡಬಹುದು. ಇದು ಕನ್ನಡಭಾಷೆಗಾಗಿ ಮಾತ್ರವಲ್ಲ ತಮಿಳು ಮಾಧ್ಯಮದಲ್ಲೇ ಓದಿದ ಎ.ಪಿ.ಜೆ ಅಬ್ದುಲ್ ಕಲಾಂ ಅವರ Achivement ಗಳ ಬಗ್ಗೆ ಹೇಳುವಂತೆಯೇ ಇಲ್ಲ.

ಇನ್ನೂ ಇದೆ......